ನನ್ನ ಹುಟ್ಟು ಸಂಭ್ರಮವ ಕೊಟ್ಟಿತ್ತೋ...ಅರಿಯೆ!
ಇರಬಹುದು ಹೆಣ್ಣೆಂದು ಒಂದಿನಕ್ಕೂ ಕಡೆಗಣಿಸಿದವನಲ್ಲ...
ನನ್ನಪ್ಪ ನನ್ನ ಯಾರಿಗೂ ಹೋಲಿಸಲಿಲ್ಲ;
ಹಲವು ತೊಂದರೆ ಸಂಕಷ್ಟಗಳ ಸಹಿಸಿದವ...
ನನ್ನ ತನ್ನ ಬೆನ್ನಿಗೆ ಕಟ್ಟಿಕೊಂಡೇ ತೋಟ ಗದ್ದೆ ತಿರುಗಿದವ....
ಚಂದಮಾಮದ ಚಂದಕಥೆಗಳ ಇನ್ನಷ್ಟು ಚಂದಗೊಳಿಸಿ ಹೇಳಿದವ ನನ್ನಪ್ಪ....
ಓದುವ ಗೀಳು ಹತ್ತಿಸಿದವ, ಕಾವ್ಯಗಳ ರುಚಿ ಹತ್ತಿಸಿದವ...
ಕತೆಗಳ ಬೆನ್ನು ಹತ್ತಿ ಓದಿಸಿದವ...
ನನ್ನಲ್ಲಿ ಚಿಂತನೆಗಳ ಬಿತ್ತಿದವ ಅಪ್ಪ...
ತನ್ನ ಮೆಚ್ಚಿನ ಹವ್ಯಾಸಗಳಿಗೆಲ್ಲ ನನ್ನ ಸಹಾಯಕಳಾಗಿಸಿ ಹಲವು ಕೆಲಸಗಳ ಕಲಿಸಿದವ...
ನನ್ನ ಧೈರ್ಯವ ಮೆಚ್ಚಿ ಝಾನ್ಸೀ ರಾಣಿ ಎಂದು ಕರೆದವ....
ಸ್ವತಂತ್ರ ಚಿಂತನೆಗೆ, ಸ್ವತಂತ್ರ ಓಡಾಟಕ್ಕೆ ಕಾರಣವಾದವ ಅಪ್ಪ...
ಮಡಿಲಲ್ಲಿ ಕುಳ್ಳಿರಿಸಿ ಕರೆದೊಯ್ದ ಮರೆಯಲಾರದ ಪಯಣಗಳು ಅದೆಷ್ಟೋ ಇದ್ದರೂ...
ಜಗತ್ತಿನ ಹುಚ್ಚು ಪ್ರವಾಹದಲ್ಲಿ ಈಜಾಡಿ ದಡ ಸೇರುವ ಕಸುವು ನನ್ನಲ್ಲಿದೆ ಎಂದು ಭರವಸೆಯಿಟ್ಟವನು ಅಪ್ಪ...
ಹೆಜ್ಜೆ ಹೆಜ್ಜೆಗೂ ಹೆಮ್ಮೆ ಪಟ್ಟವನು...
ಉಟ್ಟ ಬಟ್ಟೆ ಮಾಸಿದ್ದರೂ..
ಆತ್ಮವಿಶ್ವಾಸ ಪ್ರಕಾಶಿಸುವಂತೆ ಮಾಡಿದವನು...
ಹೋಲಿಕೆ ಇರದ ಬಾಲ್ಯವ ಕೊಟ್ಟವನು ಅಪ್ಪ....
ವಿಶ್ವ ಅಪ್ಪಂದಿರ ದಿನ - ವಿಶ್ವ ಅಮ್ಮಂದಿರ ದಿನ ಎಂಬ ಪಾಶ್ಚಾತ್ಯ ಆಚರಣೆ ಒಪ್ಪದ ನನಗೆ ಜನ್ಮವಿತ್ತವರೆಂದರೆ ನಿತ್ಯ ನೆನಪಿಸಿಕೊಳ್ಳಬೇಕಾದವರು...

No comments:
Post a Comment