Wednesday, September 16, 2009

ಕಿಟಿಕಿಯಾಚೆಗಿನ ದೃಶ್ಯ

ನೆಟ್ಟ ದೃಷ್ಟಿ ನೆಟ್ಟ ಹಾಗೆ ಸ್ಪಷ್ಟವಿಲ್ಲ ಚಿತ್ರಣ
ಕಿಟಿಕಿಯಾಚೆ ನಿಂತ ನಿನ್ನ ಮೌನ ,
ನನ್ನೆದೆಯಲೇಕೋ ಏನೋ ತಲ್ಲಣ
ಮೌನ ಮೀರಿ ಮಾತು ಬರಲಿ ಈ ಕ್ಷಣ. ........
ನಿನ್ನ ಪ್ರೀತಿ ಕರೆಯಿತೆನ್ನ ಕಿಟಿಕಿ ಹತ್ತಿರ
ಕದ್ದು ಮುಚ್ಹಿ ಕಂಡ ಕನಸ ನೆನೆಯುತ,
ನಿನ್ನ ನಗುವಲೆ ಲೀನವಾಗಿ ಮಾತು ಮರೆಯಿತು
ಮೌನ ನೀಡಿತು ಉತ್ತರ ............

Thursday, September 10, 2009

ಮುಸ್ಸಂಜೆಯ ಮೌನ

ಆಕಾಶದ ತುಂಬ ಬಿಳಿ ನೀಲಿ ಕಪ್ಪು ಮೋಡ
ಅದನೆ ನೋಡುತ ನಿಂತಿರುವೆ, ಮಾತಾಡಬೇಡ
ಮೌನ ಮೀರಿದರೆ ಈಗಿರುವ ಗಳಿಗೆ ಈಗಿಲ್ಲ
ಕಳೆದು ಹೋಗುವುದು ಈ ಆನಂದ ತರವಲ್ಲ
ನೀನಾಡುವ ಮಾತುಗಳ ಮನದಲ್ಲೇ ಆಡಬಹುದು
ಕೇಳುವುದು ನನ್ನೊಳಗಿವಿಗೆ ಆ ಗಳಿಗೆಯಲ್ಲೇ!