Sunday, January 10, 2010

ಮೌನದ ಅರ್ಥ- ಮಾತಿಗೂ ಸೂಕ್ತ

ನಾನು ಮಾತಾಡುತ್ತಲೇ ಇದ್ದೇನೆ,
ನಿನ್ನ ಮೌನವೇ ಉತ್ತರವೇನು?
ಕಾಡುವೆ ಏಕೆ ನನ್ನ ನೀ ಹೀಗೆ ,
ನಿನ್ನ ಮೌನಕ್ಕೆ ಅರ್ಥವಾದರೂ ಏನು?
ನಿನ್ನ ನೋಡಿಯೇ ಹೇಳಬಹುದು ,
ನೀ ಬಂದ ಕಾರ್ಯವೇನೋ ಇದೆ,
ಸಾವಿಲ್ಲದ ಮೌನದ್ದೇ ಮೆರವಣಿಗೆ
ನಡೆಸುತ್ತಿರುವುದಾದರೂ ಏಕೆ?
ಸಾವಿರ ಅರ್ಥ ಕೊಡುವ
ಒಂದು ಮಾತಾದರೂ ಆಡು.
ಮೌನ ಮೀರಿದಾಗ ಕಸಿವಿಸಿಯಾಗಬಹುದು,
ಕಾಡುವ ಮಾತುಗಳು ಮೌನ ತಾಳಲೂ ಬಹುದು
ಸಾವಿರದ ಅರ್ಥ ಮೌನಕ್ಕೆ ಮಾತ್ರವೇ?
ಮಾತಿಗೂ ಇರಬಹುದು .......