Tuesday, May 28, 2019

ಸುಡುವ ಮೌನವ ಮೀರಿ

ಮೌನದ ಶಕ್ತಿಯ ಬಗ್ಗೆ ಸಂಶಯವೇಕೆ?
ಮಾತಿಗಿಂತಲು ಪ್ರಬಲಾಸ್ತ್ರ ಮೌನದ್ದು,
ಮಣಿಸಬಲ್ಲುದು ಜಗವನ್ನೆ  ಕಲ್ಲುಬಂಡೆಯ ಮೌನ...
ಮುನಿಸಿಗೂ ಮೌನಕ್ಕೂ ನಂಟು ಬಹಳ...
ಅರ್ಥವಾಗದ ಮೌನ ಸುಡುವುದೊಮ್ಮೊಮ್ಮೆ ಜೀವಗಳನು...
ನೊಂದು ನುಡಿಯಲು ಬಹುದೆರಡು ಮಾತು,
ಮೌನವದು ಬರಿಯ ಶಾಪ!
ಅರ್ಥವಾದರೂ ಸರಿಯೆ, ಅರ್ಥವಾಗದಿದ್ದರೂ ಸರಿಯೆ,
ಮೌನವೆಂಬ ಬಂಗಾರಕ್ಕಿಂತ
ಮಾತೆಂಬ ಬೆಳ್ಳಿಯೇ ಸೆಳೆಯುವುದು...
ಮೌನದಿಂದಿರಲು ಕಲಹವಿಲ್ಲವೆಂಬುದೂ ಕೆಲವೊಮ್ಮೆ ಕುಹಕವೆನಿಸುವುದು...
ಸುಡುವ ಮೌನದ ದಳ್ಳುರಿಯಲಿ ಬೆಂದ ಜೀವ‌ಕ್ಕೆ
ಮೌನಮೀರುತ್ತ
ತಂಪೆರೆಯಲು ಬರಲಿ ಒಂದೆರಡು ಮಾತುಗಳು ಮಳೆಯ ಹನಿಯಂತೆ...