ಭೂಮಿಯ ಮೌನಕ್ಕೆ
ಆಕಾಶ ಮಾತಾಗಿದೆ...
ಸುರಿವ ಮಳೆಯಂತೆ
ನೆನಪುಗಳೂ...
ಗುಡುಗಿನಬ್ಬರವಿಲ್ಲ, ಹಿತವಾದ ಮಾರುತ..
ಹನಿಹನಿಯಲ್ಲೂ ಅಲ್ಲೆಲ್ಲೋ ನಿನ್ನ ಕಾಯುತ್ತ ಕೊಡೆಯಿದ್ದರೂ ನೆನೆದ ನೆನಪಿನ ತಂಪು ಮಣ್ಣಿನ ಕಂಪು..
ಕಣ್ಣು ನೆಟ್ಟಷ್ಟೂ ದೂರ ಸಮುದ್ರ,
ಸಾಗರದಲೆಗಳಲಿ ಕಳೆದು ಹೋಯಿತೇ
ನೂರು ನೋವುಗಳು..
ತೆರೆ ತೆರೆದು ತಬ್ಬಿ ನಿಂತಿತೇ ಮೌನವ
ಮೀರದಂತೆ ಕಣ್ಣೀರು ಕಾಣದಂತೆ...
ಆಕಾಶ ಮಾತಾಗಿದೆ...
ಸುರಿವ ಮಳೆಯಂತೆ
ನೆನಪುಗಳೂ...
ಗುಡುಗಿನಬ್ಬರವಿಲ್ಲ, ಹಿತವಾದ ಮಾರುತ..
ಹನಿಹನಿಯಲ್ಲೂ ಅಲ್ಲೆಲ್ಲೋ ನಿನ್ನ ಕಾಯುತ್ತ ಕೊಡೆಯಿದ್ದರೂ ನೆನೆದ ನೆನಪಿನ ತಂಪು ಮಣ್ಣಿನ ಕಂಪು..
ಕಣ್ಣು ನೆಟ್ಟಷ್ಟೂ ದೂರ ಸಮುದ್ರ,
ಸಾಗರದಲೆಗಳಲಿ ಕಳೆದು ಹೋಯಿತೇ
ನೂರು ನೋವುಗಳು..
ತೆರೆ ತೆರೆದು ತಬ್ಬಿ ನಿಂತಿತೇ ಮೌನವ
ಮೀರದಂತೆ ಕಣ್ಣೀರು ಕಾಣದಂತೆ...
