ರಾಧೆ ನೀನೇ ಪುಣ್ಯವಂತೆ
ರಾಸಗೀತೆ ಹಾಡಿದೆ.
ಆತನಿಂದು ಕಾರ್ಯನಿರತ
ಪ್ರೀತಿ ಮಾತು ಬತ್ತಿದೆ.
ರಾಗ ಮಿಡಿದ ಬೆರಳಲಿಂದು
ಚಕ್ರ ಬಂದು ನೆಲೆಸಿದೆ
ಪ್ರೇಮಧಾರೆ ಗೈಯುತಿದ್ದ
ನೇತ್ರ ಜಗವನಳೆದಿದೆ
ಹೆಗಲ ತುಂಬ ಜಗದ ಭಾರ
ಯುದ್ಧ ಕುದುರೆ ಕೆನೆದಿದೆ
ನೆನೆವನೇಕೋ ಯಮುನೆತೀರ
ಕೊಳಲು ನಾದ ಮರೆತಿದೆ
ಕನ್ನ ನಿನ್ನವನೆಂಬ ಭಾವ
ನೂರು ನೋವ ಮರೆಸದೇ?
ಇದ್ದೂ ಇರದ ಜೀವದೊಳಗೆ
ಅವನ ಚಿತ್ರ ಕದಲದೇ?
~~~~~~~~
ಸಂಧ್ಯಾ ಕಾನತ್ತೂರು