Saturday, November 13, 2010

ಅವನ ಪ್ರೇಮದ ಹಾಗೆ ......

ಟಪ್ ಟಪ್ ಟಪ್ ...
ಹನಿ ಮಳೆ ,
ಅವನ ಪ್ರೇಮದ ಹಾಗೆ!
ಅಲ್ಲಿ ಭೋರ್ಗರೆತ , ಆವೇಶ ಇಲ್ಲ,
ಬರಿಯ ಮಣ್ಣು ವಾಸನೆಗೆ
ಮೂಗರಳಿಸಿ ಆಸ್ವಾದಿಸುವ ನಿರಾಳತೆ....

ಸಂಪಿಗೆ ಮರದೆಲೆಗಳ ಮಾತ್ರ
ಅಲುಗಾಡಿಸಿದೆ ಮೇಲು ಗಾಳಿ,
ಅವನ ಪ್ರೇಮದ ಹಾಗೆ!
ರೆಂಬೆ- ಕೊಂಬೆ, ಕಾನ್ದವನ್ನೇ ಕುಲುಕಿಸಿ
ಅಸ್ತಿತ್ವವ ಮರೆಸುವುದಿಲ್ಲ,
ತೇಲಿ ಬಂದ ಸಂಪಿಗೆಯ ಕಂಪಿನಲ್ಲಿ
ಅವನ ಪ್ರೇಮ ಗಾಢವಾದಂತೆ......

ಚೈತ್ರದಲ್ಲಿ ಕುಹೂ ....
ಕೊಗಿಲೆಯುಲಿತ ,
ಅವನ ಪ್ರೇಮದ ಹಾಗೆ!
ಸೈರನ್ನಿನ ಕೊ.....
ವಿನ ಹಾಗೆ ಬೆಚ್ಚಿ ಬೀಳಿಸುವುದಿಲ್ಲ,
ಜೋಗುಳ ಹಾಡಿನ ಕೊನೆಯ ಸಾಲಿನ
ಜೋ..ಜೋ..ಜೋ....