ಹುಡುಕುತ್ತಿದ್ದೇನೆ ನಾನು,
ನನ್ನವನೆಲ್ಲೆಂದು? ಹತ್ತು ವರ್ಷಗಳ ಬಳಿಕ,
ಕಣಗಳಲ್ಲೂ ಕ್ಷಣಗಳಲ್ಲೂ ಕಳೆದು ಹೋದವನ,
ಗಳಿಕೆಗಳ ಹಿಂದೆ ಹೊರಟು ಹೋದವನ,
ಹುಡುಕುತ್ತಿದ್ದೇನೆ ನಾನು,
ಕರಿಮಣಿ ಸರದ ಮಣಿಗಳಲ್ಲಿ ,
ಬೆರಳಿನು೦ಗುರದ ಹೊಳೆವ ಕಲ್ಲಿನಲ್ಲಿ,
ಬಣ್ಣ ಬಣ್ಣದ ಸೀರೆ ಚೂಡಿದಾರಗಳಲ್ಲಿ,
ಪಿಸು ಮಾತು - ಹುಸಿನಗು
ಮರೆತು ಹೋದ ಉಸಿರ ಬಿಸಿಗಳ,
ಹುಡುಕುತ್ತಿದ್ದೇನೆ ನಾನು,
ನಲುವತ್ತರ ಹತ್ತಿರವಿರುವ
ಈ ದಿನಗಳಲ್ಲಿ , ಇಣುಕುತ್ತಿರುವ
ಬಿಳಿ ಕೂದಲುಗಳಿಗೆ ಮದರಂಗಿಯ
ಬಣ್ಣ ಬಳಿಯುತ್ತ, ಅವನೆಲ್ಲೆಂದು?
ಚೆಲುವ ಚೆನ್ನಿಗ ನನ್ನವನು,
ಕುಳಿತಿದ್ದಾನೆ ಕುರ್ಚಿಯ ಮೇಲೆ
ಮೈ ಚೆಲ್ಲಿ, ತಲೆ ಹಿಂದಕ್ಕೊರಗಿಸಿ
ಕಪ್ಪು ಬಳಿದ ಕೂದಲಲ್ಲಿ ಬೆರಳಾಡಿಸುತ್ತಾ ,
ಒಪ್ಪಿಕೊಳ್ಳುತ್ತಿದ್ದೇನೆ ನಾನು, ಇವನೇ ಅವನು -ನನ್ನವನು.
ನನ್ನವನೆಲ್ಲೆಂದು? ಹತ್ತು ವರ್ಷಗಳ ಬಳಿಕ,
ಕಣಗಳಲ್ಲೂ ಕ್ಷಣಗಳಲ್ಲೂ ಕಳೆದು ಹೋದವನ,
ಗಳಿಕೆಗಳ ಹಿಂದೆ ಹೊರಟು ಹೋದವನ,
ಹುಡುಕುತ್ತಿದ್ದೇನೆ ನಾನು,
ಕರಿಮಣಿ ಸರದ ಮಣಿಗಳಲ್ಲಿ ,
ಬೆರಳಿನು೦ಗುರದ ಹೊಳೆವ ಕಲ್ಲಿನಲ್ಲಿ,
ಬಣ್ಣ ಬಣ್ಣದ ಸೀರೆ ಚೂಡಿದಾರಗಳಲ್ಲಿ,
ಪಿಸು ಮಾತು - ಹುಸಿನಗು
ಮರೆತು ಹೋದ ಉಸಿರ ಬಿಸಿಗಳ,
ಹುಡುಕುತ್ತಿದ್ದೇನೆ ನಾನು,
ನಲುವತ್ತರ ಹತ್ತಿರವಿರುವ
ಈ ದಿನಗಳಲ್ಲಿ , ಇಣುಕುತ್ತಿರುವ
ಬಿಳಿ ಕೂದಲುಗಳಿಗೆ ಮದರಂಗಿಯ
ಬಣ್ಣ ಬಳಿಯುತ್ತ, ಅವನೆಲ್ಲೆಂದು?
ಚೆಲುವ ಚೆನ್ನಿಗ ನನ್ನವನು,
ಕುಳಿತಿದ್ದಾನೆ ಕುರ್ಚಿಯ ಮೇಲೆ
ಮೈ ಚೆಲ್ಲಿ, ತಲೆ ಹಿಂದಕ್ಕೊರಗಿಸಿ
ಕಪ್ಪು ಬಳಿದ ಕೂದಲಲ್ಲಿ ಬೆರಳಾಡಿಸುತ್ತಾ ,
ಒಪ್ಪಿಕೊಳ್ಳುತ್ತಿದ್ದೇನೆ ನಾನು, ಇವನೇ ಅವನು -ನನ್ನವನು.