ನಿನ್ನ ನೋಟದ ತುಂಬ
ಸಾಲು ದೀಪದ ಬೆಳಕು,
ಮಾತು ಮರೆತು ನಿಂತೆ
ನಾನು ನಿನ್ನ ಪ್ರೀತಿ ಬೆಳಕಲಿ....
ಮೊದಲ ಸಲ ದೀಪದೆದುರು
ಕಣ್ಣ ಕಾಂತಿ ಸಡ್ಡು ಹೊಡೆಯಿತು,
ಕತ್ತಲೆಂದೂ ಬರದು ಎಂದು
ನನಗೆ ಸಾರಿ ಹೇಳಿತು.
ಮೌನ ಮೀರಿದ ಮಾತಿಗಿಂತ
ನಿನ್ನ ಕಣ್ಣ ಮಾತೆ ಇಂಪು,
ಹೃದಯ ತುಂಬಿ ಒಪ್ಪಿದೆ .
ದೀಪಾವಳಿಯ ಬೆಳಕು
ಮೌನ-ಮಾತು ಬೆಸೆದಿದೆ...
ಕಣ್ಣು ಕಣ್ಣಲಿ ಬೆರೆತು
ಬೆಳಕು ಬಳ್ಳಿಯು ಹಬ್ಬಿದೆ.
Saturday, October 24, 2009
Subscribe to:
Posts (Atom)