Monday, August 17, 2009

ನೆನಪುಗಳು ಮಧುರ

ಹದಿನೈದು ವರ್ಷಗಳ ಹಿಂದೊಮ್ಮೆ
ನಡೆದು ಹೋಗಿದ್ದ ದಾರಿ ಈಗಲೂ
ಮತ್ತೆ ಮತ್ತೆ ನೆನಪಾಗುತ್ತಿದೆ
ದಾರಿಯುದ್ದಕು ಮೌನದ್ದೆ ಮೆರವಣಿಗೆ
ಮರಗಳು ಬೀಸಿದ ಗಾಳಿಯಲ್ಲಿ ಕೇಳುತ್ತಿತ್ತು
ನಿನ್ನ ಪಿಸು ಮಾತು....................
ಪಕ್ಷಿಗಳ ಚಿಲಿಪಿಲಿಯಲ್ಲಿ ನಿನ್ನ ನಗೆ ಚಿಲುಮೆ
ಅರಸುತ್ತೇನೆ ಇಂದೂ ನಾನು ಈ ಬೆನ್ಗಾಡಿನಲ್ಲೂ.........,
ಮೌನ ಮರೆತು ನಕ್ಕು ಬಿಡೋಣ
ಪಿಸು ಮಾತುಗಳಲಿ ಕಳೆದು ಹೋಗೋಣ........

No comments:

Post a Comment