Sunday, August 16, 2009

ಕಳೆದು ಹೋಗುವುದು ಬೇಡ

ನಮ್ಮಿಬ್ಬರ ನಡುವೆ ಬೆಳೆದದ್ದು
ಮೌನ ಬೆಟ್ಟ...........
ನೋಡಲು ಹಿಮ ಪರ್ವತ
ಒಳಗೇ ಕುದಿವ ಜ್ವಾಲಾಮುಖಿ
ಗಿರಿ ಕಂದರದಲ್ಲಿ ಹರಿದ ಪ್ರವಾಹ
ಬೆಟ್ಟದ ತಳ ಸೇರಿದವೇ
ನನ್ನ ಮಾತುಗಳು!
ಬೆಟ್ಟದಾಚೆಗೆಲ್ಲೋ ನೀನು
ಬಚ್ಚಿಟ್ಟುಕೊಂಡು ಕರೆಯುತ್ತಿರುವೆ
ಎಲ್ಲೆಂದು ಹುಡುಕಲಿ ಹೇಳು
ಸೋತು ಹೋಗಿದ್ದೇನೆ
ಮೌನ ಹಿಮ ಕರಗಿ
ಹರಿಯಲಿ ಮಾತಿನ ಪ್ರವಾಹ
ಜ್ವಾಲಾಮುಖಿ ಸಿಡಿವ ಮುನ್ನ
ನಾವು ಕಳೆದು ಹೋಗುವ ಮುನ್ನ..........

No comments:

Post a Comment