Saturday, July 6, 2019

ನೋವು

ಬಚ್ಚಿಟ್ಟ ನೋವುಗಳು ಎದೆಯೊಳಗೆ ಬೇಯುತ್ತವೆ,
ಬಿಚ್ಚಿಡುವೆನೆಂದರದು ಮುಟ್ಟಲಾರದಷ್ಟು ಸುಡುತ್ತದೆ!
ಕೆಂಡದೊಲೆಮೇಲೆ ಕಣ್ಣೀರು
ಬತ್ತಿ ಆವಿಯಾಗುವುದು,
ಮೋಡಕಟ್ಟಿದ ಬಾನಿಂದ ರಾತ್ರಿಯಲಿ ಸದ್ದಿಲ್ಲದೇ ಸುರಿವ  ಮಳೆಯಂತೆ,
ಬಿಕ್ಕಳಿಕೆ ತುಟಿ ದಾಟದಂತೆ
ಕಾಯುವುದು,
ಬಾಗಿಲಿನೊಳಗೇ ನೋವನಡಗಿಸಿ
ಹುಸಿ ನಗುವೊಂದು ಹೊಸಿಲಲ್ಲಿ
ತಾ ಬಂದು ನಿಲ್ಲುವುದು
ಜಗದ ಕಣ್ಣಿಗೆ ಕಾಣದಂತೆ
ಮುಚ್ಚಿದ ಬೂದಿಯಲಿ
ಕೆಂಡ ಅಡಗಿದಂತೆ!


No comments:

Post a Comment