ಒಂದು ಕಾಡಿನಲ್ಲಿ ಎರಡು ಗಿಣಿಗಳು ವಾಸವಾಗಿದ್ದವು. ಅವರಲ್ಲಿ ಒಂದು ಹೆಣ್ಣು ಗಿಣಿ ಮತ್ತು ಒಂದು ಗಂಡು ಗಿಣಿ.
ಹೀಗಿರುವಾಗ ಒಂದು ದಿನ ಹೆಣ್ಣು ಗಿಣಿ ಎರಡು ಮೊಟ್ಟೆ ಇಟ್ಟಿತು. ಅವುಗಳಿಗೆ ಕಾವು ಕೊಟ್ಟು ಮರಿ ಮಾಡಿತು.
ಗಿಣಿಗಳು ಮರಿಗಳೊಂದಿಗೆ ಸಂತೋಷದಿಂದ ಇದ್ದವು. ಹೀಗಿರುವಾಗ ಒಂದು ದಿನ ಕಾಡ್ಗಿಚ್ಚು ಹೊತ್ತಿಕೊಂಡಿತು.
ಆಗ ಹೆಣ್ಣು ಗಿಣಿ ಗಂಡು ಗಿಣಿಗೆ ನಾವು ಮಕ್ಕಳೊಂದಿಗೆ ಬೇರೆ ಕಡೆ ಹೋಗೋಣ ಎಂದಿತು. ಅದಕ್ಕೆ ಗಂಡು ಗಿಣಿ
ಅದರ ಅಗತ್ಯ ಇಲ್ಲ, ನಾವಿರುವ ಮರ ತುಂಬಾ ಎತ್ತರವಿದೆ, ಇಲ್ಲಿ ವರೆಗೆ ಬೆಂಕಿ ಬರುವುದಿಲ್ಲ, ನಾವೆಲ್ಲಿಗೂ
ಹೋಗುವ ಅಗತ್ಯ ಇಲ್ಲ ಎಂದು ಹೇಳಿತು. ಸ್ವಲ್ಪ ಹೊತ್ತಿನ ನಂತರ ಬೆಂಕಿ ಅವರಿದ್ದ ಮರಕ್ಕೂ ಹಬ್ಬಿತು.
ಆಗ ಹೆಣ್ಣು ಗಿಣಿ ದಿಕ್ಕು ತೋಚದೆ ಗಂಡು ಗಿಣಿಯನ್ನು ಹುಡುಕಿತು. ಆದರೆ ಗಂಡು ಗಿಣಿ ಕಾಣಿಸಲಿಲ್ಲ. ಅದಾಗಲೇ
ಹಾರಿ ಹೋಗಿತ್ತು. ಹೆಣ್ಣು ಗಿಣಿ ಮತ್ತು ಮರಿಗಳು ಬೆಂಕಿಯಲ್ಲಿ ಬೆಂದು ಸತ್ತು ಹೋದವು.
Monday, July 5, 2010
Subscribe to:
Post Comments (Atom)
No comments:
Post a Comment