ನಿನ್ನ ಮೌನಕ್ಕೆ ನಾನು ಮೌನದಲ್ಲೇ
ಉತ್ತರ ಹೇಳಬೇಕು ಅಂದುಕೊಂಡೆ,
ಸಾಧ್ಯವಾಗಲಿಲ್ಲ ಸುಮ್ಮನಿರಲು.....
ನಿಟ್ಟುಸಿರಲ್ಲೇ ಕಳೆದ ವೇಳೆ, ಕರಗುತ್ತಿತ್ತು
ವಿಷಾದ ಛಾಯೆ ನನ್ನೊಳಗೇ,
ಏಕೆ ಬಂದೆ ನೀನು ಮತ್ತೆ ಮನದೊಳಗೆ?
ತಿಳಿನೀರ ಮೇಲೆ ಕಲ್ಲೆಸೆದು ಕಲಕಿದ್ದಾದರೂ ಯಾಕೆ?
ಸುಮ್ಮನಾಗು ಮನಸೇ, ಸುಮ್ಮನೆ ನಗು...
Tuesday, November 10, 2009
Subscribe to:
Post Comments (Atom)
No comments:
Post a Comment